ಕಾನ್‍ಸ್ಟಂಟ್ಯಾನ್

ನಿಕಲ್ ಮತ್ತು ತಾಮ್ರ್ರಗಳ ಒಂದು ಮಿಶ್ರಲೋಹ. ಮಿಶ್ರಣದ ಪ್ರಮಾಣ ನಿಕಲ್ 40%, ತಾಮ್ರ 60%. ಸಾಮಾನ್ಯವಾಗಿ ನಿಕ್ಕಲ್ ಮಿಶ್ರಲೋಹಗಳ ವಿದ್ಯುದ್ವಾಹಕತೆ ಅಲ್ಪ. ಆದ್ದರಿಂದ ಅವನ್ನು ವಿದ್ಯುನ್ನಿರೋಧಕ ಲೋಹತಂತಿಗಳ ತಯಾರಿಕೆಯಲ್ಲಿ ಬಳಸುವರು. ಕಾನ್‍ಸ್ಟಾಂಟನ್ ಮಿಶ್ರಲೋಹದ ವಿದ್ಯುದ್ವಾಹಕತೆ ಉಷ್ಣತೆಯ ಮಟ್ಟದ ಮೇಲೆ ಅಷ್ಟಾಗಿ ಅವಲಂಬಿತವಾಗಿಲ್ಲ. ತಾಮ್ರದೊಂದಿಗೆ ಉಷ್ಣ ವಿದ್ಯುಚ್ಛಕ್ತಿ ಹೆಚ್ಚು. ಹೀಗಾಗಿ ಕಾನ್‍ಸ್ಟಂಟ್ಯಾನ್-ತಾಮ್ರದ ಜೋಡಿಯನ್ನು ಉಷ್ಣಮಾಪನದಲ್ಲಿ ಬಳಸುವರು. ಇದರ ಪ್ರಮುಖ ಲಕ್ಷಣಗಳೆಂದರೆ ಅತ್ಯುಚ್ಚ ರೋಧತೆ, ಅತ್ಯಲ್ಪ ಉಷ್ಣತಾಗುಣಾಂಕ, ವಿದ್ಯುದ್ರೋಧ ಪೆಟ್ಟಿಗೆಗಳಲ್ಲಿ ರೋಧ ತಂತುವಾಗಿ ಬಳಕೆ. 

    (ಎಚ್.ಎಸ್.ಎನ್.)

       (ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ